ಇದು ಒಂದು ಬಹಳ ಸರಳವಾದ, ಸಾತ್ವಿಕ ಮತ್ತು ರುಚಿಕರ ಸಾರು ಮತ್ತು ಪಲ್ಯ.
ಬೇಕಾಗುವ ಪದಾರ್ಥಗಳು.
1. ಸೊಪ್ಪು
(ಉದಾ: ಸಬ್ಬಾಕ್ಷಿ ಸೊಪ್ಪು, ಪಾಲಕ್ ಸೊಪ್ಪು ಇತ್ಯಾದಿ ). -- 3 ಕಟ್ಟು
2. ತೊಗರಿ ಬೇಳೆ -- 1 ಬಟ್ಟಲು.
3. ಬೆಳ್ಳುಳ್ಳಿ -- 6-8 ಎಸಳು.
4. ಜೀರಿಗೆ -- 1 ಟೀ ಚಮಚ .
5. ಕಾಳು ಮೆಣಸು -- 2 ಟೀ ಚಮಚ.
6. ಈರುಳ್ಳಿ -- 2 ದೊಡ್ಡ ಗಾತ್ರ.
7. ಹಸಿ ಮೆಣಸಿನಕಾಯಿ -- 3.
8. ನಿಂಬೆಹಣ್ಣು -- 1.
9. ಕೋತಂಬರಿ ಸೊಪ್ಪು(ಕೊಚ್ಚಿದ್ದು} -- 1 ಬಟ್ಟಲು.
10. ಉಪ್ಪು -- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ.
- ಮೊದಲಿಗೆ ಬೇಳೆ ಅರ್ಧಬೆಂದ ಮೇಲೆ ಸೊಪ್ಪನ್ನು ಹಾಕಿ ಬೇಯಿಸಿರಿ. ಬೆಂದ ಬೇಳೆ ಮತ್ತು ಸೊಪ್ಪು ಆರಿದ ಬಳಿಕ ಕಟ್ಟನ್ನು ಬಸೆಯಿರಿ.
- ಸ್ವಲ್ಪ ಎಣ್ಣೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಮೆಣಸು ಮತ್ತು ಜೀರಿಗೆ ಇದೇ ಕ್ರಮದಲ್ಲಿ ಹುರಿದು ಕೊಳ್ಳಿ. ತಣ್ಣಗಾದ ಮೇಲೆ ಇದಕ್ಕೆ 2 ದೊಡ್ಡ ಚಮಚ ಬೇಯಿಸಿದ ಸೊಪ್ಪುಮತ್ತು ಬೆಳೆಯ ಮಿಶ್ರಣ, ಮತ್ತು ಅರ್ಧ ಬಟ್ಟಲು ಕೊತ್ತಂಬರಿ ಸೊಪ್ಪುಹಾಕಿ ರುಬ್ಬಿ ಕೊಳ್ಳಿ. ರುಬ್ಬಿದ ಮಸಾಲೆಯನ್ನು ಕಟ್ಟಿಗೆ ಬೆರೆಸಿ. ಒಂದು ನಿಂಬೆ ಹಣ್ಣಿನರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಗ್ಗರಣೆ ಕೊಡಿ.
- ಪಲ್ಯಕ್ಕೆ ಅರ್ಧ ಬಟ್ಟಲು ತೆಂಗಿನ ತುರಿ, ಸ್ವಲ್ಪ ನಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಗ್ಗರಣೆ ಕೊಡಿ.
- ಒಗ್ಗರಣೆಗೆ: 2 ಚಮಚ ಎಣ್ಣೆಯನ್ನು ಕಾಯಿಸಿ ಸಣ್ಣಗೆ ಕೊಚ್ಚಿದ ಈರುಳ್ಳಿ, 2 ಹಸಿಮೆಣಸಿನ ಕಾಯಿ, ಸಾಸಿವೆ ಮತ್ತು ಕರಿಬೇವು ಹಾಕಿ.
- ಈಗ ರುಚಿಯಾದ ವಂಚಿಚಾರು ಮತ್ತು ಪಲ್ಯ ರಾಗಿ ಮುದ್ದೆ ಮತ್ತು ಅನ್ನದೊಂದಿಗೆ ಸವಿಯಲು ಸಿದ್ಧ.
No comments:
Post a Comment